ಬಾಲಿವುಡ್‍ನ ಹ್ಯಾಂಡ್ಸಮ್ ಹಂಕ್ ರಣಬೀರ್ ಕಪೂರ್ ನಮ್ಮ ನ್ಯಾಷನಲ್ ಕ್ರಷ್ ರಶ್ಮಿಕಾ ಮುಂದೆ ತಂದೆಯಾಗುವ ಬಯಕೆಯನ್ನ ಹೊರಹಾಕಿದ್ದಾರೆ. ಇದೊಂದು ಸಾಲು ನಿಮ್ಮೆಲ್ಲರನ್ನೂ ಕುತೂಹಲದ ಕೊಂಬೆ ಮೇಲೆ ಕೂರಿಸೋದು ಸಹಜ. ಅಲಿಯಾ ಭಟ್ ಕೈ ಹಿಡಿದು ಈಗಾಗಲೇ ಒಂದು ಮಗು ಮಾಡಿಕೊಂಡಿರೋ ರಣಬೀರ್, ರಶ್ಮಿಕಾ ಮುಂದೆ ಯಾಕೇ ಅಪ್ಪನಾಗುವ ಆಸೆಯನ್ನು ಹೇಳಿಕೊಂಡರು? ಹೀಗೊಂದು ಅನುಮಾನ ನಿಮ್ಮೆಲ್ಲರನ್ನೂ ಕೆರಳಿಸೋದು ಸತ್ಯ. ಆದರೆ ಇದು ರಿಯಲ್ ಲೈಫ್ ಮಾತುಕತೆ ಅಲ್ಲ ಬದಲಾಗಿ ರೀಲ್ ಲೈಫ್ ಸಿನಿಮಾದಲ್ಲಿ ಅನ್ನೋದು ಗಮನಿಸಬೇಕಾದ ವಿಚಾರ
ಯಸ್, ರಣಬೀರ್ ಕಪೂರ್ ಹಾಗೂ ರಶ್ಮಿಕಾ ಫಸ್ಟ್ ಟೈಮ್ ಸ್ಕ್ರೀನ್ ಶೇರ್ ಮಾಡಿದ್ದಾರೆ. `ಅನಿಮಲ್’ ಸಿನಿಮಾದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇವತ್ತು ಚಾಕೋಲೇಟ್ ಹೀರೋ ರಣಬೀರ್ ಕಪೂರ್ ಹುಟ್ಟುಹಬ್ಬ. ಹೀಗಾಗಿ, ಅನಿಮಲ್ ಟೀಮ್ ಬರ್ಫಿ ಬಾಯ್‍ಗೆ ಟೀಸರ್ ಗಿಫ್ಟ್ ಕೊಟ್ಟಿದೆ. ಹಿಂದಿ, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಐದು ಭಾಷೆಯಲ್ಲಿ ರಿಲೀಸ್ ಆಗಿರೋ `ಅನಿಮಲ್’ ಟೀಸರ್ ಯೂಟ್ಯೂಬ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ಹಿಂದಿ ವರ್ಷ ಟೀಸರ್ ಗೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದ್ದು, ಕೇವಲ ಒಂದೇ ಗಂಟೆಯಲ್ಲಿ ಮಿಲಿಯನ್ ವೀವ್ಸ್ ದಾಟಿದೆ. ಪರಭಾಷೆಯಲ್ಲೂ ಅನಿಮಲ್ ಟೀಸರ್ ಸಿನಿಮಾ ಪ್ರೇಮಿಗಳ ಗಮನ ಸೆಳೆಯುತ್ತಿದೆ
ಮಕ್ಕಳು ಬಗ್ಗೆ ಯೋಚನೆ ಮಾಡಿದ್ದೀರಾ ಅಂತ ರಶ್ಮಿಕಾ ಕೇಳೋ ಪ್ರಶ್ನೆಯಿಂದಲೇ ಟೀಸರ್ ಶುರುವಾಗುತ್ತೆ. ಯಸ್, ಅಪ್‍ಕೋರ್ಸ್ ತಂದೆಯಾಗುವ ಆಸೆಯಿದೆ ಅಂತ ರಣಬೀರ್ ಹೇಳಿದ ಕೂಡಲೇ ನೀವು ನಿಮ್ಮಪ್ಪನ ಥರ ಅಲ್ಲಾ ಅಲ್ಲವಾ ಅಂತ ರಶ್ಮಿಕಾ ಮತ್ತೆ ಮರು ಪ್ರಶ್ನೆ ಹಾಕ್ತಾಳೆ. ವಿಶ್ವದಲ್ಲೇ ನಮ್ಮಪ್ಪನ ಥರ ಮತ್ತೊಬ್ಬ ಅಪ್ಪ ಇಲ್ಲ ಎಂದು ಸಿಡಿದೇಳುವ ರಣಬೀರ್, ಗೀತಾಂಜಲಿ ನೀನು ಏನು ಬೇಕಾದರೂ ಕೇಳು ನಾನು ಹಾನೆಸ್ಟಾಗಿ ಆನ್ಸರ್ ಮಾಡ್ತೀನಿ. ಆದರೆ, ಇದರ ಬಗ್ಗೆ ಪ್ರಶ್ನೆ ಮಾಡಬೇಡ ಅಂತ ರಣಬೀರ್ ವಾರ್ನ್ ಮಾಡೋ ಸನ್ನಿವೇಶದೊಂದಿಗೆ ಇವರಿಬ್ಬರ ಸೀಕ್ವೆನ್ಸ್ ಟೀಸರ್ ನಲ್ಲಿ ಕೊನೆಗೊಳ್ಳುತ್ತೆ. ಸ್ಕ್ರೀನ್ ಮೇಲೆ ರಶ್ಮಿಕಾ ಹಾಗೂ ರಣಬೀರ್ ಜೋಡಿ ಫ್ರೆಶ್ ಎನಿಸ್ತಿದೆ. ಹಾಲುಗಲ್ಲದ ಈ ಕ್ಯೂಟ್ ಜೋಡಿನಾ ಕಣ್ತುಂಬಿಕೊಳ್ಳುವ ಕಾತುರ ಟೀಸರ್ ನೋಡಿದ್ಮೇಲೆ ದುಪ್ಪಟ್ಟಾಗಿದೆ. ಇವರಿಬ್ಬರ ಕೆಮಿಸ್ಟ್ರಿ ಸಖತ್ತಾಗೇ ವರ್ಕೌಟ್ ಆಗುವ ಸೂಚನೆ ಸಿಗ್ತಾಯಿದೆ, ಒಂದ್ವೇಳೆ ಕ್ಲಿಕ್ ಆದರೆ, ನ್ಯಾಷನಲ್ ಕ್ರಷ್ ಬಿಟೌನ್‍ನಲ್ಲಿ ಫಿಕ್ಸ್ ಆಗೋದ್ರಲ್ಲಿ ನೋ ಡೌಟ್
ಇನ್ನೂ `ಅನಿಮಲ್’ ಚಿತ್ರದ ಬಗ್ಗೆ ಹೇಳೋದಾದರೆ ತಂದೆ-ಮಗನ ಸಂಬಂಧದ ಮೇಲೆ ಸಾಗುವ ಸಿನಿಮಾ. ಬ್ಯಾಕ್‍ಡ್ರಾಪ್‍ನಲ್ಲಿ ಅಂಡರ್ ವಲ್ರ್ಡ್ ಲಿಂಕ್ ಮಾಡಿ ಫಾದರ್ ಅಂಡ್ ಸನ್ ರಿಲೇಷನ್‍ಶಿಪ್‍ನ ಎಕ್ಸ್ ಪ್ಲೋರ್ ಮಾಡಿದ್ದಾರೆ. ಅಪ್ಪನಾಗಿ ಅನಿಲ್ ಕಪೂರ್ ಕಾಣಿಸಿಕೊಂಡರೆ, ಮಗನ ಪಾತ್ರದಲ್ಲಿ ರಣಬೀರ್ ಮಿಂಚಿದ್ದಾರೆ. ಔಟ್ ಅಂಡ್ ಔಟ್ ಮಾಸ್ ಲುಕ್‍ನಲ್ಲಿ ಮೀಸೆ ತಿರುವಿಕೊಂಡು ಅಖಾಡಕ್ಕೆ ಇಳಿದಿರೋ ರಾಕ್‍ಸ್ಟರ್ ರಣಬೀರ್, `ಅನಿಮಲ್’ ಸಿನಿಮಾ ಮೂಲಕ ಗ್ಯಾಂಗ್‍ಸ್ಟರ್ ಆಗಿ ಖದರ್ ತೋರಿಸಲು ಹೊರಟಿದ್ದಾರೆ. ಚಿತ್ರಕ್ಕೆ ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನವಿದ್ದು, ಬಾಬಿ ಡಿಯೋಲ್ ಖಡಕ್ ವಿಲನ್ನಾಗಿ ಧಗಧಗಿಸಿದ್ದಾರೆ. ಸುರೇಶ್ ಓಬೆರಾಯ್, ಶಕ್ತಿಕಪೂರ್ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ.
ಸಂಜು ಸಿನಿಮಾದ ನಂತರ ತೆರೆಗೆ ಬಂದ ಶಂಶೇರಾ ಹಾಗೂ ಬ್ರಹ್ಮಾಸ್ತ್ರ ಅಂದುಕೊಂಡ ಮಟ್ಟಿಗೆ ಲಾಭ ತಂದುಕೊಟ್ಟಿಲ್ಲ. ಹೀಗಾಗಿ, ರಣಬೀರ್ `ಅನಿಮಲ್’ ಸಿನಿಮಾ ಮೇಲೆ ಸಾಕಷ್ಟು ಭರವಸೆಯಿಟ್ಟುಕೊಂಡಿದ್ದಾರೆ. ಚಾಕೋಲೇಟ್ ಹೀರೋ ಆಗಿ ಕ್ಲಿಕ್ ಆಗಿರುವ ರಣಬೀರ್ ಈಗ ಮಾಸ್ ಹೀರೋ ಆಗಿ ಮೋಡಿ ಮಾಡಲು ಬರುತ್ತಿದ್ದಾರೆ. ಭೂಷಣ್ ಕುಮಾರ್ , ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್, ಮುರಾದ್ ಖೇತಾನಿಯ ಸಿನಿ 1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ಅನಿಮಲ್ ಸಿನಿಮಾ ನಿರ್ಮಿಸಿದೆ. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿ ಅನಿಮಲ್ ಡಿಸೆಂಬರ್ 1 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.





