ಗುರುವಾರ, ಜುಲೈ 23, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಸಮಂತಾ ಜಾಗಕ್ಕೆ ರಶ್ಮಿಕಾ! ಗೀತಾಗೋವಿಂದಂ ಜೋಡಿ ನೋಡಿ ಫ್ಯಾನ್ಸ್ ಪುಳಕ!

Vishalakshi Pby Vishalakshi P
27/09/2023
in Majja Special
Reading Time: 1 min read
ಸಮಂತಾ ಜಾಗಕ್ಕೆ ರಶ್ಮಿಕಾ! ಗೀತಾಗೋವಿಂದಂ ಜೋಡಿ ನೋಡಿ ಫ್ಯಾನ್ಸ್ ಪುಳಕ!

ಸಾನ್ವಿ ಉರುಫ್ ರಶ್ಮಿಕಾ ಮಂದಣ್ಣ ಒಂದಿಲ್ಲೊಂದು ಕಾರಣಕ್ಕೆ ಪ್ರತಿದಿನವೂ ಸುದ್ದಿಯಲ್ಲಿರುತ್ತಾರೆ. ಇವತ್ತು ಸೌತ್ ಸುಂದರಿ ಸಮಂತಾ ಜಾಗಕ್ಕೆ ಬಂದು ಕುಳಿತುಕೊಳ್ಳುವ ಮೂಲಕ ಬ್ರೇಕಿಂಗ್ ನ್ಯೂಸ್ ಆಗಿದ್ದಾರೆ. ಮಜಿಲಿ ನಟಿಸಬೇಕಿದ್ದ ಚಿತ್ರ ಚಮಕ್ ಚೆಲ್ವಿ ಪಾಲಾಗಿದ್ದು, ಟಾಲಿವುಡ್ ಫಿಲ್ಮ್ ನಗರದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ.

ಹೌದು, ತೆಲುಗು ಡೈರೆಕ್ಟರ್ ರಾಹುಲ್ ರವಿಚಂದ್ರನ್ ನಿರ್ದೇಶನದ ಮುಂದಿನ ಸಿನಿಮಾಗೆ ಮನಂ ಸುಂದರಿ ನಾಯಕಿ ಎನ್ನಲಾಗಿತ್ತು. ಆದ್ರೀಗ, ಅನಾರೋಗ್ಯದಿಂದ ಕಾರಣಕ್ಕೆ ಸಮಂತಾ ಈ ಸಿನಿಮಾದಿಂದ ಹೊರನಡೆದಿದ್ದಾರಂತೆ. ಹೀಗಾಗಿ, ಸ್ಯಾಮ್ ನಟಿಸಬೇಕಿದ್ದ ಪಾತ್ರಕ್ಕೆ ಸಾನ್ವಿ ಅಲಿಯಾಸ್ ರಶ್ಮಿಕಾ ಮಂದಣ್ಣ ಅವ್ರನ್ನ ನಿರ್ದೇಶಕ ರಾಹುಲ್ ಅಪ್ರೋಚ್ ಮಾಡಿದ್ದಾರಂತೆ. ಕಥೆ ಕೇಳಿ ಥ್ರಿಲ್ಲಾಗಿರೋ ರಶ್ಮಿಕಾ ಚಿತ್ರಕ್ಕೆ ಓಕೆ ಹೇಳಿದ್ದಾರಂತೆ, ಇದೊಂದು ಮಹಿಳಾಪ್ರಧಾನ ಸಿನಿಮಾವಾಗಿದ್ದು, ನ್ಯಾಷನಲ್ ಸ್ಟಾರ್ ರಶ್ಮಿಕಾನ ನ್ಯೂ ಲುಕ್‍ನಲ್ಲಿ ತೋರಿಸುವುದಕ್ಕೆ ಡೈರೆಕ್ಟರ್ ರಾಹುಲ್ ತಯ್ಯಾರಿ ಮಾಡಿಕೊಳ್ಳುತ್ತಿದ್ದಾರಂತೆ.

ಸ್ಯಾಮ್ ಕೈಬಿಟ್ಟ ಸಿನಿಮಾ ಸಾನ್ವಿ ಕೈ ಸೇರಿರುವುದು ಇದೇ ಮೊದಲಲ್ಲ. ಈ ಹಿಂದೆ ರೈನ್‍ಬೋ ಚಿತ್ರದಿಂದ ಸಮಂತಾ ಹೊರನಡೆದಾಗ ಚಲೋ ಸುಂದರಿ ಆನ್‍ಬೋರ್ಡ್ ಆಗಿದ್ದರು. ಸದ್ಯ, ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ವರ್ಕ್‍ನಲ್ಲಿದೆ. ಏತನ್ಮಧ್ಯೆ ರಶ್ಮಿಕಾಗೆ ಮತ್ತೊಮ್ಮೆ ಸ್ಯಾಮ್ ನಟಿಸಬೇಕಿದ್ದ ಸಿನಿಮಾದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿದೆ. ಗೀತಾ ಆಟ್ರ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಜನಪ್ರಿಯ ನಿರ್ಮಾಪಕ ಅಲ್ಲು ಅರವಿಂದ್ ಹಾಗೂ ಬನ್ನಿ ವಾಸ್ ಬಂಡವಾಳ ಹೂಡುತ್ತಿದ್ದಾರೆ.

ಪುಷ್ಪ-2, ಅನಿಮಲ್, ರೈನ್‍ಬೋ ಹೊರತುಪಡಿಸಿ ಮತ್ಯಾವ ಹೊಸ ಚಿತ್ರವೂ ಅನೌನ್ಸ್ ಆಗದೇ ಇರುವ ಕಾರಣಕ್ಕೆ ರಶ್ಮಿಕಾಗೆ ಅವಕಾಶಗಳು ಕಡಿಮೆಯಾಗ್ತಿವೆ, ಶ್ರೀವಲ್ಲಿ ಕ್ರೇಜ್ ಡೇ ಬೈ ಡೇ ತಗ್ಗುತ್ತಿದೆ ಎನ್ನುವ ಮಾತುಗಳು ಕೇಳಿಬಂದಿದ್ವು. ಆದ್ರೀಗ, ಒಂದಲ್ಲ, ಎರಡಲ್ಲ ಮೂರ್ಮೂರು ಚಿತ್ರಗಳು ಕಿರಿಕ್ ಬ್ಯೂಟಿ ಕೈಯಲ್ಲಿವೆ. ಸ್ಯಾಮ್ ಔಟ್ ಆದ ಸಿನಿಮಾ ಮಾತ್ರವಲ್ಲ ಶ್ರೀಲೀಲಾ ಹೊರಬಂದ ಚಿತ್ರಗಳೂ ಕೂಡ ಶ್ರೀವಲ್ಲಿ ಕೈ ಸೇರಿವೆ. ಹೌದು, ‘ಜೆರ್ಸಿ’ ಡೈರೆಕ್ಟರ್ ಗೌತಮ್ ನಾಯ್ಡು ತಿನ್ನನೂರಿ ನಿರ್ದೇಶನದ ಸಿನಿಮಾದಲ್ಲಿ ರೌಡಿಬಾಯ್ ವಿಜಯ್ ದೇವರಕೊಂಡಾಗೆ ಶ್ರೀಲೀಲಾ ಹೀರೋಯಿನ್ನಾಗಿ ಆಯ್ಕೆಯಾಗಿದ್ದರು. ಅದ್ದೂರಿಯಾಗಿ ಸೆಟ್ಟೇರಿದ ಮುಹೂರ್ತದಲ್ಲೂ ಭರಾಟೆ ಬ್ಯೂಟಿ ಭಾಗಿಯಾಗಿದ್ದಳು. ಆದ್ರೀಗ, ಈ ಚಿತ್ರದಿಂದ ಹೊರನಡೆದಿದ್ದಾಳೆ. ಹತ್ತಾರು ಸಿನಿಮಾಗಳಲ್ಲಿ ಬ್ಯುಸಿಯಿರುವ ಧಮಾಕ ಚೆಲುವೆ, ಡೇಟ್ ಕ್ಲ್ಯಾಶ್‍ನಿಂದಾಗಿ ಕಿಸ್ಸಿಂಗ್ ಸ್ಟಾರ್ ವಿಜಯ್ ಸಿನಿಮಾವನ್ನ ಕೈಬಿಟ್ಟಿದ್ದಾಳೆ. ಇನ್ನೂ ಮಾಸ್‍ಮಹರಾಜ ರವಿತೇಜಾ ಸಿನಿಮಾಗೂ ಕಿಸ್ ಬ್ಯೂಟಿ ಕೈಕೊಟ್ಟಿದ್ದು, ಕಿರಿಕ್ ಚೆಲುವೆ ಡಾನ್ ಸೀನು ಪಕ್ಕದಲ್ಲಿ ನಿಂತು ಕಣ್ಣುಬ್ಬು ಎಗರಿಸುತ್ತಿದ್ದಾಳೆ.

ಇಂಟ್ರೆಸ್ಟಿಂಗ್ ಅಂದರೆ ಲಿಲ್ಲಿ-ಬಾಬಿ ಕಾಂಬಿನೇಷನ್ ಮತ್ತೆ ಒಂದಾಗುತ್ತಿರುವುದು. ಹೌದು, ಗೀತಾಗೋವಿಂದಂ ಮೂಲಕ ಜೋಡಿಯಾಗಿ ದಿಬ್ಬಣ ಹೊರಟ ರಶ್ಮಿಕಾ-ವಿಜಯ್, ಡಿಯರ್ ಕಾಮ್ರೇಡ್ ಮೂಲಕವೂ ಮೋಡಿ ಮಾಡಿದ್ದರು. ಈಗ ಮೂರನೇ ಬಾರಿಗೆ ಜೊತೆಯಾಗುತ್ತಿದ್ದಾರೆ. ಲಿಲ್ಲಿ ಔಟ್ ಆಗಿ ಶ್ರೀವಲ್ಲಿ ಬಂದಿದ್ದಕ್ಕೆ ರೌಡಿಬಾಯ್ ಫ್ಯಾನ್ಸ್ ದಿಲ್ ಪಸಂದ್ ಸವಿದಿದ್ದಾರೆ. ಲಿಪ್‍ಲಾಕ್ ಮಾಡದೇ ಇದ್ರೂ ಪರವಾಗಿಲ್ಲ, ನೀವಿಬ್ಬರು ಅಕ್ಕ-ಪಕ್ಕ ನಿಲ್ಲಿ ಎನ್ನುತ್ತಾ ಅವರಿಬ್ಬರನ್ನೂ ತಲೆಮೇಲೆ ಹೊತ್ತು ಮೆರೆಸಲು ವಲ್ರ್ಡ್ ಫೇಮಸ್ ಲವ್ವರ್ ಅಭಿಮಾನಿಗಳು ರೆಡಿಯಾಗುತ್ತಿದ್ದಾರೆ. ಫಿಲ್ಮ್ ಟೀಮ್ ಕಡೆಯಿಂದ ರಶ್ಮಿಕಾ ಆನ್‍ಬೋರ್ಡ್ ಅಂತ ಅನೌನ್ಸ್ ಮಾಡಲೆಂದು ಕಾಯ್ತಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ರಶ್ಮಿಕಾ ಮುಂದೆ ಅಪ್ಪನಾಗುವ ಬಯಕೆ ಹೊರಹಾಕಿದ ರಣಬೀರ್!

ರಶ್ಮಿಕಾ ಮುಂದೆ ಅಪ್ಪನಾಗುವ ಬಯಕೆ ಹೊರಹಾಕಿದ ರಣಬೀರ್!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.