ಭಾನುವಾರ, ಜುಲೈ 19, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ವಿಜಯ್ ದೇವರಕೊಂಡ ನಂತರ ರಣಬೀರ್ ಗೆ ಲಿಪ್ ಕಿಸ್ ಹೊಡೆದ ರಶ್ಮಿಕಾ!

Vishalakshi Pby Vishalakshi P
10/10/2023
in Majja Special
Reading Time: 1 min read
ವಿಜಯ್ ದೇವರಕೊಂಡ ನಂತರ ರಣಬೀರ್ ಗೆ ಲಿಪ್ ಕಿಸ್ ಹೊಡೆದ ರಶ್ಮಿಕಾ!

ಕಿರಿಕ್ ಬ್ಯೂಟಿ ರಶ್ಮಿಕಾ ಕಿಸ್ ವಿಚಾರಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಟೌನ್ ಚಾಕಲೇಟ್ ಹೀರೋ ರಣಬೀರ್ ಕಪೂರ್ ಗೆ ಲಿಪ್ ಕಿಸ್ ಹೊಡೆಯೋ ಮೂಲಕ ಸುದ್ದಿಮನೆಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ.

ಕನ್ನಡತಿ ರಶ್ಮಿಕಾ, ಬಾಲಿವುಡ್ ಹೀರೋ ರಣಬೀರ್ ಕಪೂರ್ ಜೊತೆ ಸ್ಕ್ರೀನ್ ಶೇರ್ ಮಾಡಿರುವುದು ನಿಮಗೆಲ್ಲ ಗೊತ್ತೆಯಿದೆ. `ಅನಿಮಲ್’ ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ತಿದ್ದು ಈಗಾಗಲೇ ಟೀಸರ್ ಮೂಲಕ ಗಮನ ಸೆಳೆದಿದೆ. ಸದ್ಯ ಲೀಕ್ ಆಗಿರುವ ಲಿಪ್‍ಲಾಕ್ ಪೋಸ್ಟರ್ ಹಲ್ ಚಲ್ ಎಬ್ಬಿಸುತ್ತಿದೆ. ರಣ್ಬೀರ್-ರಶ್ಮಿಕಾ ಮುತ್ತಿನ ಮತ್ತು ಪಡ್ಡೆಹೈಕ್ಳಿಗೆ ಕಿಕ್ಕೇರಿಸುತ್ತಿದ್ದು ಪಿಕ್ಚರ್ ಅಭಿ ಬಾಕಿ ಹೈ ಎನ್ನುತ್ತಿದೆ ಅನಿಮಲ್ ಫಿಲ್ಮ್ ಟೀಮ್

 

ಯಸ್, ಅನಿಮಲ್ ರಿಲೀಸ್‍ಗೆ ಡೇಟ್ ಫಿಕ್ಸಾಗಿದೆ. ಡಿಸೆಂಬರ್ 01ರಂದು ಸಿನಿಮಾ ತೆರೆಗೆ ತರಲು ಪ್ಲ್ಯಾನ್ ಮಾಡಿರುವ ಚಿತ್ರತಂಡ `ಅನಿಮಲ್’ ಕಂಟೆಂಟ್‍ನ ಒಂದೊಂದಾಗಿ ಔಟ್ ಮಾಡುತ್ತಾ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸುತ್ತಿದೆ. ಇತ್ತೀಚೆಗಷ್ಟೇ ರಣಬೀರ್ ಹುಟ್ಟುಹಬ್ಬಕ್ಕೆ `ಅನಿಮಲ್’ ಟೀಸರ್ ಗಿಫ್ಟ್ ಕೊಟ್ಟಿದ್ದರು. ಈಗ ಸಾಂಗ್ ರಿಲೀಸ್ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು ಅದರಲ್ಲಿ `ಹುವಾ ಮೈನ್’ ಹಾಡನ್ನು ನಾಳೆ ರಿಲೀಸ್ ಮಾಡಲಾಗ್ತಿದೆ. ಇದು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿರುವುದರಿಂದ ಐದು ಭಾಷೆಯಲ್ಲೂ ಸಾಂಗ್‍ನ ಅನಾವರಣ ಮಾಡ್ತಿದ್ದಾರೆ. ಅದರ ಭಾಗವಾಗಿಯೇ ಇಂದು ರಣಬೀರ್ ಹಾಗೂ ರಶ್ಮಿಕಾ ಲಿಪ್‍ಲಾಕ್ ಪೋಸ್ಟರ್ ಬಿಡುಗಡೆಗೊಳಿಸಲಾಗಿದೆ.

ಅಷ್ಟಕ್ಕೂ, ನಟಿ ರಶ್ಮಿಕಾಗೆ ಹಾಗೂ ರಣಬೀರ್ ಗೆ ಲಿಪ್‍ಲಾಕ್ ಏನು ಹೊಸದಲ್ಲ. ಈ ಹಿಂದೆ ಕೋಸ್ಟಾರ್‍ಗಳ ಜೊತೆ ಕಿಸ್ಸಿಂಗ್ ಸೀನ್ಸ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೀತಗೋವಿಂದಂ ಹಾಗೂ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ರೌಡಿಬಾಯ್ ತುಟಿಗೆ ತುಟಿ ಅಂಟಿಸಿದ್ದ ಶ್ರೀವಲ್ಲಿ, ಫಸ್ಟ್ ಟೈಮ್ ರಾಕ್ ಸ್ಟಾರ್ ರಣಬೀರ್ ಗೆ ಲಿಪ್ ಕಿಸ್ ಹೊಡೆದಿರುವುದು ಸಿನಿಮಾ ಪ್ರೇಮಿಗಳಿಗೆ ಕುತೂಹಲ ಕೆರಳಿಸಿದೆ. `ಹುವಾ ಮೈನ್’ ಹಾಡಲ್ಲಿ ಇವರಿಬ್ಬರ ಕೆಮಿಸ್ಟ್ರಿ ಹೆಂಗ್ ವರ್ಕೌಟ್ ಆಗಿರಬಹುದು ಅನ್ನೋದನ್ನ ನೋಡೋದಕ್ಕೆ ಕಲಾರಸಿಕರ ಬಳಗ ಕಣ್ಣರಳಿಸಿ ಕೂತಿದೆ. ಈಗಾಗಲೇ ಟೀಸರ್‍ನಲ್ಲಿ ನೋಡಿರುವಂತೆ ಸ್ಕ್ರೀನ್ ಮೇಲೆ ರಶ್ಮಿಕಾ ಹಾಗೂ ರಣಬೀರ್ ಜೋಡಿ ಫ್ರೆಶ್ ಎನಿಸ್ತಿದೆ. ಹಾಲುಗಲ್ಲದ ಈ ಕ್ಯೂಟ್ ಜೋಡಿನಾ ಕಣ್ತುಂಬಿಕೊಳ್ಳುವ ಕಾತುರ ಟೀಸರ್ ನೋಡಿದ್ಮೇಲೆ ದುಪ್ಪಟ್ಟಾಗಿದೆ. ಇವರಿಬ್ಬರ ಕೆಮಿಸ್ಟ್ರಿ ಸಖತ್ತಾಗೇ ವರ್ಕೌಟ್ ಆಗುವ ಸೂಚನೆ ಸಿಗ್ತಾಯಿದೆ, ಒಂದ್ವೇಳೆ ಕ್ಲಿಕ್ ಆದರೆ, ನ್ಯಾಷನಲ್ ಕ್ರಷ್ ಬಿಟೌನ್‍ನಲ್ಲಿ ಫಿಕ್ಸ್ ಆಗೋದ್ರಲ್ಲಿ ನೋ ಡೌಟ್

ಇನ್ನೂ `ಅನಿಮಲ್’ ಚಿತ್ರದ ಬಗ್ಗೆ ಹೇಳೋದಾದರೆ ತಂದೆ-ಮಗನ ಸಂಬಂಧದ ಮೇಲೆ ಸಾಗುವ ಸಿನಿಮಾ. ಬ್ಯಾಕ್‍ಡ್ರಾಪ್‍ನಲ್ಲಿ ಅಂಡರ್ ವಲ್ರ್ಡ್ ಲಿಂಕ್ ಮಾಡಿ ಫಾದರ್ ಅಂಡ್ ಸನ್ ರಿಲೇಷನ್‍ಶಿಪ್‍ನ ಎಕ್ಸ್ ಪ್ಲೋರ್ ಮಾಡಿದ್ದಾರೆ. ಅಪ್ಪನಾಗಿ ಅನಿಲ್ ಕಪೂರ್ ಕಾಣಿಸಿಕೊಂಡರೆ, ಮಗನ ಪಾತ್ರದಲ್ಲಿ ರಣಬೀರ್ ಮಿಂಚಿದ್ದಾರೆ. ಔಟ್ ಅಂಡ್ ಔಟ್ ಮಾಸ್ ಲುಕ್‍ನಲ್ಲಿ ಮೀಸೆ ತಿರುವಿಕೊಂಡು ಅಖಾಡಕ್ಕೆ ಇಳಿದಿರೋ ರಾಕ್‍ಸ್ಟರ್ ರಣಬೀರ್, `ಅನಿಮಲ್’ ಸಿನಿಮಾ ಮೂಲಕ ಗ್ಯಾಂಗ್‍ಸ್ಟರ್ ಆಗಿ ಖದರ್ ತೋರಿಸಲು ಹೊರಟಿದ್ದಾರೆ. ಚಿತ್ರಕ್ಕೆ ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನವಿದ್ದು, ಬಾಬಿ ಡಿಯೋಲ್ ಖಡಕ್ ವಿಲನ್ನಾಗಿ ಧಗಧಗಿಸಿದ್ದಾರೆ. ಸುರೇಶ್ ಓಬೆರಾಯ್, ಶಕ್ತಿಕಪೂರ್ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ.

ಸಂಜು ಸಿನಿಮಾದ ನಂತರ ತೆರೆಗೆ ಬಂದ ಶಂಶೇರಾ ಹಾಗೂ ಬ್ರಹ್ಮಾಸ್ತ್ರ ಅಂದುಕೊಂಡ ಮಟ್ಟಿಗೆ ಲಾಭ ತಂದುಕೊಟ್ಟಿಲ್ಲ. ಹೀಗಾಗಿ, ರಣಬೀರ್ `ಅನಿಮಲ್’ ಸಿನಿಮಾ ಮೇಲೆ ಸಾಕಷ್ಟು ಭರವಸೆಯಿಟ್ಟುಕೊಂಡಿದ್ದಾರೆ. ಚಾಕೋಲೇಟ್ ಹೀರೋ ಆಗಿ ಕ್ಲಿಕ್ ಆಗಿರುವ ರಣಬೀರ್ ಈಗ ಮಾಸ್ ಹೀರೋ ಆಗಿ ಮೋಡಿ ಮಾಡಲು ಬರುತ್ತಿದ್ದಾರೆ. ಭೂಷಣ್ ಕುಮಾರ್ , ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್, ಮುರಾದ್ ಖೇತಾನಿಯ ಸಿನಿ 1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ಅನಿಮಲ್ ಸಿನಿಮಾ ನಿರ್ಮಿಸಿದೆ. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿ ಅನಿಮಲ್ ಡಿಸೆಂಬರ್ 1 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ನಟಸಿಂಹ & ನರಸಿಂಹನ ಎದುರು ತೊಡೆ ತಟ್ಟಿದ ದಳಪತಿ! ಟೈಗರ್ ವರ್ಸಸ್ ಟೈಗರ್ ಇದು ದಸರಾ ದಂಗಲ್!

ನಟಸಿಂಹ & ನರಸಿಂಹನ ಎದುರು ತೊಡೆ ತಟ್ಟಿದ ದಳಪತಿ! ಟೈಗರ್ ವರ್ಸಸ್ ಟೈಗರ್ ಇದು ದಸರಾ ದಂಗಲ್!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.