ನಟ ಧರ್ಮ ಕೀರ್ತಿರಾಜ್, ತಿಲಕ್, ರುತ್ವಿ ಪಟೇಲ್, ವರ್ಧನ್ ರಘು ಪಾಂಡೇಶ್ವರ್, ಬಲರಾಜವಾಡಿ, ರತಕ್ ಕರತಮಾಡ ಮೊದಲಾದವರು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಸಸ್ಪೆೆನ್ಸ್-ಥ್ರಿಲ್ಲರ್ ಕಥಾಹಂದರದ ‘ರೋನಿ’ ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಯಾಗಿದೆ. ಇದೇ ವೇಳೆ ಮಾತನಾಡಿದ ಧರ್ಮ ಕೀರ್ತಿರಾಜ್, ‘ನಾವುಗಳು ಯಾವುದೇ ನಿರ್ಮಾಪಕರಿಗೆ ತೊಂದರೆ ಕೊಡುತ್ತಿಲ್ಲ. ಒಮ್ಮೆಲೆ ಹಲವು ಸಿನಿಮಾಗಳು ಬಿಡುಗಡೆಯಾದರೆ ಯಾರಿಗೂ ಅದರಿಂದ ಪ್ರಯೋಜನವಾಗುವುದಿಲ್ಲ. ಸಿನಿಮಾವನ್ನು ಚೆನ್ನಾಾಗಿ ಮಾಡಿದಷ್ಟೇ ಪ್ರಚಾರವನ್ನೂ ಚೆನ್ನಾಾಗಿ ಮಾಡಿದರೆ, ಸಿನಿಮಾ ಗೆಲ್ಲಬಹುದು’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

‘ಲಕ್ಷೀ ಗಣಪತಿ ಸ್ಟುಡಿಯೋಸ್’ ಮತ್ತು ‘ರೋಶಿಕಾ ಎಂಟರ್ಪ್ರೈಸಸ್’ ಬ್ಯಾಾನರ್ನಲ್ಲಿ ನಿರ್ಮಾಣವಾಗಿರುವ ‘ರೋನಿ’ ಸಿನಿಮಾಕ್ಕೆೆ ‘ದ ಹಂಟರ್’ ಎಂಬ ಅಡಿಬರಹವಿದ್ದು, ಕಿರಣ್ ಆರ್. ಕೆ ಈ ಸಿನಿಮಾಕ್ಕೆೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ‘ಇದೊಂದು ಸಸ್ಪೆೆನ್ಸ್-ಥ್ರಿಲ್ಲರ್ ಶೈಲಿಯ ಸಿನಿಮಾ. ಶ್ರೀಮಂತ ಹುಡುಗಿ ಮನೆಯಲ್ಲಿರುವ ಮೂವತ್ತು ಕೋಟಿ ದರೋಡೆ ಆಗುತ್ತದೆ. ಇದನ್ನು ತನಿಖೆ ನಡೆಸಲು ಎಸಿಪಿ ಅಧಿಕಾರಿಯೊಬ್ಬರು ನೇಮಕವಾಗುತ್ತಾಾರೆ. ಆದರೆ ಅವರಿಂದ ಅದನ್ನು ಹುಡುಕಲಾಗದೆ ವರ್ಗಾವಣೆಗೊಳ್ಳುತ್ತಾಾರೆ. ನಂತರ ಕೇಸ್ ಸಿಸಿಬಿ ಅಧಿಕಾರಿಗೆ ಬರುತ್ತದೆ. ಇದರ ಮಧ್ಯೆೆ ಎರಡು ಕೊಲೆಗಳು ನಡೆಯುತ್ತದೆ. ಎರಡಕ್ಕೂ ಒಂದೇ ಸಾಮ್ಯತೆ ಇರುತ್ತದೆ. ಕೊಲೆ ಮಾಡಿದವರು ಯಾರು? ಇದಕ್ಕೆೆ ಸಂಬಂದವೇನು? ಆಕೆಗೆ ನ್ಯಾಯ ಸಿಗುತ್ತದಾ? ಎಂಬುದೇ ಸಿನಿಮಾದ ಕಥೆಯ ಎಳೆ. ಸಿನಿಮಾದಲ್ಲಿ ನಾಲ್ಕು ಮುಖ್ಯ ಪಾತ್ರಗಳಿದ್ದು, ಅದರಲ್ಲಿ ‘ರೋನಿ’ ಯಾರು ಎಂಬುದು ಕ್ಲೈಮಾಕ್ಸ್ನಲ್ಲಿ ತಿಳಿಯುತ್ತದೆ’ ಎಂಬುದು ಕಥಾಹಂದರದ ಬಗ್ಗೆೆ ‘ರೋನಿ’ ನಿರ್ದೇಶಕ ಕಿರಣ್ ಆರ್. ಕೆ ನೀಡುವ ವಿವರಣೆ.
ಉಳಿದಂತೆ ‘ರೋನಿ’ ಸಿನಿಮಾಕ್ಕೆ ವೀನಸ್ ಮೂರ್ತಿ ಛಾಯಾಗ್ರಹಣ, ವೆಂಕಿ ಯು.ಡಿ.ವಿ ಸಂಕಲನವಿದೆ. ಬೆಂಗಳೂರು, ಮಂಗಳೂರು ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ‘ರೋನಿ’ ನಿರ್ಮಾಣವಾಗಿದ್ದು, ಇದೇ ಅಕ್ಟೊಬರ್ ತಿಂಗಳಲ್ಲಿ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.





