ಸ್ಯಾಂಡಲ್‌ವುಡ್ ನಟ ಪ್ರವೀಣ್ ತೇಜ್ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಪ್ರವೀಣ್ ಈ ಬಾರಿ ಮಾಸ್ ಲುಕ್‌ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೆ ಮೊದಲ ಬಾರಿಗೆ ಪ್ರವೀಣ್ ‘ಜಿಗರ್’ ಎನ್ನುವ ಆ್ಯಕ್ಷನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿ ರಿಲೀಸ್‌ಗೆ ರೆಡಿಯಾಗಿರುವ ‘ಜಿಗರ್’ ಸದ್ಯ ಹಾಡಿನ ಮೂಲಕ ಮೊದಲ ಆಮಂತ್ರಣ ನೀಡಿದೆ.

‘ಜಿಗರ್’ ಸಿನಿಮಾದ ಮೊದಲ ಹಾಡು ಇತ್ತೀಚೆಗೆ ರಿಲೀಸ್ ಆಗಿದೆ. ಮಾಸ್ ಸಿನಿಮಾ ಆಗಿದ್ದರೂ ಸದ್ಯ ರೊಮ್ಯಾಂಕ್ ಹಾಡಿನ ಮೂಲಕ ಮೋಡಿ ಮಾಡುತ್ತಿದ್ದಾರೆ ಪ್ರವೀಣ್. ಅಂದಹಾಗೆ ಸದ್ಯ ಬಿಡುಗಡೆಯಾಗಿರುವ ಈ ಹಾಡು ಸಂಚಿತ್ ಹೆಗ್ಡೆ ಕಂಠದಲ್ಲಿ ಮೂಡಿಬಂದಿದೆ.
‘ಸುಮ್ಮನೆ…..’ ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡಿಗೆ ರಿತ್ವಿಕ್ ಮುರಳಿಧರ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸುಂದರ ಹಾಡಿಗೆ ಅರ್ಜುನ್ ಲೂಯಿಸ್ ಸಾಹಿತ್ಯವಿದೆ. ಈಗಾಗಲೇ ‘ಚಮಕ್’, ‘ವೆನಿಲ್ಲ’, ‘ಸಖತ್’ ಸೇರಿದಂತೆ ಅನೇಕ ಸಿನಿಮಾಗಳಿಗೆ ಹಾಡು ಬರೆದಿರುವ ಅರ್ಜುನ್ ಇದೀಗ ‘ಜಿಗರ್’ ಸಿನಿಮಾದ ಹಾಡನ್ನೂ ಬರೆದಿದ್ದಾರೆ. ಈ ಸುಂದರ ಹಾಡನ್ನು ಮಲ್ಪೆ, ಮರುವಂತೆ, ಮಂಗಳೂರು ಹೀಗೆ ಕರಾವಳಿ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಸಿನಿಮಾ ಕೂಡ ಇದೇ ಬ್ಯಾಕ್‌ಡ್ರಾಪ್‌ನಲ್ಲಿ ಇರಲಿದೆ. ಸೂರಿ ಕುಂದರ್ ‘ಜಿಗರ್’ ಸಿಮಿಮಾವನ್ನು ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಪ್ರವೀಣ್‌ಗೆ ನಾಯಕಿಯಾಗಿ ವಿಜಯ್ ಶ್ರೀ ಕಾಣಿಸಿಕೊಂಡಿದ್ದಾರೆ. ಪೂಜಾವಸಂತ್ ಕುಮಾರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.





