ಇಂಡಿಯನ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ ಆ್ಯಕ್ಟ್ ಮಾಡಬೇಕು. ಅವರ ಸಿನಿಮಾಗಳಲ್ಲಿ ಸಣ್ಣದೊಂದು ಪಾತ್ರ ಸಿಕ್ಕರೂ ಸಾಕು, ಅದಕ್ಕೆ ಬಣ್ಣ ಹಚ್ಚಬೇಕು ಎಂಬುದು ಅದೆಷ್ಟೋ ಕಲಾವಿದರ ಕನಸು. ಹೀಗೊಂದು ಮಹಾಕನಸು ನಮ್ಮ ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ದುನಿಯಾ ವಿಜಯ್ ಅವರಿಗೆ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಶಿವಾಜಿ ದಿ ಬಾಸ್ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಸಿಕ್ಕಿದೆ ಎನ್ನಲಾಗ್ತಿದೆ. `ತಲೈವರ್-171′ ಸಿನಿಮಾದಲ್ಲಿ ಬಾಷಾ ಜೊತೆ ಭೀಮ ಧಗಧಗಿಸೋದು ಗ್ಯಾರಂಟಿ ಎನ್ನುವ ಸುದ್ದಿ ಹಲ್ ಚಲ್ ಎಬ್ಬಿಸಿದೆ.

`ತಲೈವರ್-171′ ನಿರ್ದೇಶಕ ಲೋಕೇಶ್ ಕನಗರಾಜ್ ಆ್ಯಕ್ಷನ್ ಕಟ್ ಹೇಳ್ತಿರುವ ಸಿನಿಮಾ. ದಕ್ಷಿಣ ಭಾರತದ ಜನಪ್ರಿಯ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಬಂಡವಾಳ ಹೂಡ್ತಿದೆ. `ಜೈಲರ್’ ಬ್ಲಾಕ್ಬಸ್ಟರ್ ಬೆನ್ನಲ್ಲೇ ಸನ್ ಪಿಕ್ಚರ್ಸ್ ಮತ್ತೊಮ್ಮೆ ಸೂಪರ್ ಸ್ಟಾರ್ ಜೊತೆ ಕೈ ಜೋಡಿಸಿದ್ದು, ಅಧಿಕೃತವಾಗಿ ಸಿನಿಮಾ ಘೋಷಿಸಿದೆ. ಲೋಕೇಶ್ ಕನಗರಾಜ್ ಡೈರೆಕ್ಷನ್, ಅನಿರುದ್ದ್ ರವಿಚಂದರ್ ಮ್ಯೂಸಿಕ್ ಕಂಪೋಸಿಷನ್, ಅನ್ಬರಿವ್ ಆ್ಯಕ್ಷನ್ ಕೊರಿಯಾಗ್ರಫಿ ಚಿತ್ರಕ್ಕಿದ್ದು ಈಗ ಸ್ಯಾಂಡಲ್ವುಡ್ ಒಂಟಿಸಲಗ ಹೆಸರು ಕೇಳಿಬರುತ್ತಿದೆ. ಬಾಷಾ ಎದುರು ಗುದ್ದಾಡೋದಕ್ಕೆ ಗಂಧದಗುಡಿಯ ಭೀಮನಿಗೆ ಮಣೆ ಹಾಕಿದ್ದಾರೆನ್ನಲಾಗ್ತಿದೆ.
ಇನ್ನೂ ಸ್ಯಾಂಡಲ್ವುಡ್ ಭೀಮನ ತಾಕತ್ತೇನು ಎಂಬುದು ಈಗಾಗಲೇ ಪರಭಾಷಿಗರಿಗೆ ಗೊತ್ತಾಗಿದೆ. ಟಾಲಿವುಡ್ ನಟಸಿಂಹನ ಎದುರು ಬ್ಲಾಕ್ ಕೋಬ್ರಾ ಘರ್ಜಸಿದ್ದನ್ನ ಕಂಡಿರುವ ನಿರ್ದೇಶಕ ಲೋಕೇಶ್ ಕನಗರಾಜ್, ಕರಿಚಿರತೆನಾ ಪಡೆಯಪ್ಪನ ಮುಂದೆ ಕಣಕ್ಕಿಳಿಸೋದಕ್ಕೆ ಮುಂದಾಗಿದ್ದಾರಂತೆ. ಈಗಾಗಲೇ ದುನಿಯಾ ವಿಜಯ್ ಅವ್ರನ್ನ ಅಪ್ರೋಚ್ ಮಾಡಿ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರಂತೆ. ಬಾಬಾ ಅವ್ರನ್ನ ಗುರುಗಳ ಸ್ಥಾನದಲ್ಲಿ ನೋಡುವ ದುನಿಯಾ ವಿಜಯ್, ಖಡಕ್ ಖಳನಾಯಕ ಪಾತ್ರವಲ್ಲದೇ, ಸಿಂಪಲ್ ಕ್ಯಾರೆಕ್ಟರ್ ಕೊಟ್ಟರೂ ಕೂಡ ಜೀವತುಂಬುತ್ತಾರೆ ಅನ್ನೋದ್ರಲ್ಲಿ ನೋ ಡೌಟ್.

ನಿಮಗೆಲ್ಲ ಗೊತ್ತಿರೋ ಹಾಗೇ ನಿರ್ದೇಶಕ ಲೋಕೇಶ್ ಕನಗರಾಜ್ ತಮ್ಮ ಸಿನಿಮಾಗಳಲ್ಲಿ ಖಳನಾಯಕರ ಪಾತ್ರಕ್ಕೆ ತುಂಬಾನೇ ಒತ್ತುಕೊಡ್ತಾರೆ. ಅವ್ರು ಸೃಷ್ಟಿಸೋ ವಿಲನಿಶ್ ರೋಲ್ಗಳು ಪ್ರೇಕ್ಷಕರನ್ನ ಹುಬ್ಬೇರಿಸುತ್ತವೆ. ಹೀಗಾಗಿ, ವಿಜಯ್ ಅಭಿಮಾನಿಗಳು ತಮ್ಮ ಬಾಸ್ನ ಲೋಕೇಶ್ ಅವ್ರು ಹೇಗ್ ತೋರಿಸಬಹುದು ಅಂತ ಲೆಕ್ಕಚ್ಚಾರ ಹಾಕ್ತಿದ್ದಾರೆ. ಸದ್ಯಕ್ಕೆ, ಲೋಕೇಶ್ ಲಿಯೋ ಸಿನಿಮಾ ಸಕ್ಸಸ್ ಗುಂಗಲ್ಲಿದ್ದಾರೆ. ಅತ್ತ ತಲೈವಾ ತಮ್ಮ 170ನೇ ಸಿನಿಮಾದ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ. 33 ವರ್ಷಗಳ ನಂತರ ಬಾಲಿವುಡ್ ಬಿಗ್ ಬಿ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಒಂದಾಗಿದ್ದು ಶೂಟಿಂಗ್ ಭರದಿಂದ ಸಾಗ್ತಿದೆ. ಇತ್ತೀಚೆಗೆಷ್ಟೇ ಮುಂಬೈನಲ್ಲಿ ನಡೆದ ಚಿತ್ರೀಕರಣದಲ್ಲಿ ದಿಗ್ಗಜರಿಬ್ಬರು ಭಾಗಿಯಾಗಿದ್ದಾರೆ. ಆ ಫೋಟೋನ ಲೈಕಾ ಸಂಸ್ಥೆ ಹಂಚಿಕೊಂಡಿದೆ. ದಂತಕಥೆಗಳಿಂದ `ತಲೈವಾ -170′ ಸಿನಿಮಾ ಪ್ರೇಕ್ಷಕರಿಗೆ ಡಬಲ್ ಡೋಸ್ ನೀಡಲಿದೆ ಅಂತ ಟ್ವೀಟ್ ಮಾಡಿದೆ. ಶೀಘ್ರದಲ್ಲೇ ಸೆಕೆಂಡ್ ಷೆಡ್ಯೂಲ್ಡ್ ಶೂಟಿಂಗ್ ಶುರುವಾಗಲಿದೆ. ಈ ಸಿನಿಮಾ ರಿಲೀಸ್ ಹಂತಕ್ಕೆ ತಂದು ನಿಲ್ಲಿಸಿದ ನಂತರ ಬಾಬಾ ಲೋಕೇಶ್ ಕನಗರಾಜ್ ಅಖಾಡಕ್ಕೆ ಬರುತ್ತಾರೆ. ಇದಕ್ಕಿನ್ನೂ ಸಮಯ ಬೇಕು. ಆದರೆ, ಈಗಾಗಲೇ ಸ್ಟಾರ್ ಕಾಸ್ಟ್ ವಿಚಾರಕ್ಕೆ ತಲೈವರ್ 171 ಚರ್ಚೆಯಲ್ಲಿದೆ. ನಟ ದುನಿಯಾ ವಿಜಯ್ ಹೆಸರು ಮೊದಲಿಗೆ ಕೇಳಿಬಂದಿದೆ.

ಸದ್ಯ ವಿಜಯ್ `ಭೀಮ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ವರ್ಕ್ನಲ್ಲಿ ಬ್ಯುಸಿಯಿದ್ದಾರೆ. `ಸಲಗ’ ಸಿನಿಮಾದ ನಂತರ ಮತ್ತೊಮ್ಮೆ ಡೈರೆಕ್ಷರ್ ಕ್ಯಾಪ್ ತೊಟ್ಟು ಅಖಾಡಕ್ಕಿಳಿದಿದ್ದಾರೆ. ನಟನೆಯ ಜೊತೆಗೆ ನಿರ್ದೇಶನದ ಜವಾಬ್ದಾರಿ ಹೆಗಲಿಗೇರಿಸಿಕೊಂಡು ಕಣಕ್ಕಿಳಿದಿರೋ ವಿಜಯ್, `ಭೀಮ’ನಾಗಿ ತನ್ನ ತಾಕತ್ತೇನು ಎಂಬುದನ್ನು ಸಿನಿದುನಿಯಾಗೆ ತೋರಿಸ ಹೊರಟಿದ್ದಾರೆ. ಈ ನಡುವೆ ಲೈಕಾ ಸಂಸ್ಥೆ ರೆಡ್ಕಾರ್ಪೆಟ್ ಹಾಕಿದೆ. ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರ್ ಎದುರು ದುನಿಯಾ ವಿಜಯ್ ಅವ್ರನ್ನ ವಿಲನ್ನಾಗಿ ನಿಲ್ಲಿಸಿದೆ. ಇತ್ತೀಚೆಗಷ್ಟೇ ಲೈಕಾ ಸಂಸ್ಥೆ ಹಾಗೂ ಸ್ವತಃ ನಿಖಿಲ್ ಅವರು ವಿಜಯ್ ತಮ್ಮ ಸಿನಿಮಾದ ಭಾಗವಾಗ್ತಿರೋದ್ರ ಬಗ್ಗೆ ಟ್ವಿಟ್ ಮಾಡಿದ್ದರು. ಇದರ ಬೆನ್ನಲ್ಲೇ ಸನ್ ಪಿಕ್ಚರ್ಸ್ ಸಂಸ್ಥೆಯ ಸಿನಿಮಾದ ಭಾಗವಾಗುವ ಅವಕಾಶ ಬಂದಂತೆ ಕಾಣ್ತಿದೆ. ಒಂದ್ವೇಳೆ ಇದು ನಿಜವಾದರೆ ಇಂಡಿಯಾದ ಮೊದಲ ಸೂಪರ್ ಸ್ಟಾರ್ ಜೊತೆ ವಿಜಿಯಣ್ಣ ವಲ್ರ್ಡ್ ವೈಡ್ ದಿಬ್ಬಣ ಹೊರಡ್ತಾರೆ. `ಜೈಲರ್’ ಸಿನಿಮಾದಲ್ಲಿ ರಜನಿ ಜೊತೆ ಶಿವಣ್ಣ ಕಮಾಲ್ ಮಾಡಿದಂತೆ, `ತಲೈವರ್-171′ ಸಿನಿಮಾದಲ್ಲಿ ಶಿವಾಜಿ ದಿ ಬಾಸ್ ಜೊತೆ ದುನಿಯಾ ವಿಜಯ್ ಧಗಧಗಿಸಲಿ ಅನ್ನೋದೇ ನಮ್ಮಾಸೆ.






