ಸ್ಯಾಂಡಲ್ವುಡ್ ಚಿತ್ರ ಪ್ರೇಮಿಗಳು ಮಾತ್ರವಲ್ಲ ಸಮಸ್ತ ಸೌತ್ ಸಿನಿಮಾ ಪ್ರೇಕ್ಷಕರು ಕಣ್ಣರಳಿಸಿರೋ ಚಿತ್ರ `ಸಪ್ತಸಾಗರದಾಚೆ ಎಲ್ಲೋ’ ಸೈಡ್ ಬಿ. ಯಸ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರಾ ಜೆ ಆಚಾರ್ ಕಾಂಬಿನೇಷನ್ ನಲ್ಲಿ ಬರಲಿರೋ ಸೀಕ್ವೆಲ್ನ ಕಣ್ತುಂಬಿಕೊಳ್ಳುವುದಕ್ಕೆ ಮೂವೀ ಲವ್ವರ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಎರೆಡೆರಡು ಭಾರಿ ರಿಲೀಸ್ ಡೇಟ್ ಮುಂದೂಡಿದರೂ ಕೂಡ ಸಿನಿಮಾದ ಮೇಲಿರುವ ಕುತೂಹಲ ಮಾತ್ರ ಕಡಿಮೆಯಾಗಿಲ್ಲ. ದಿನೇ ದಿನೇ ನಿರೀಕ್ಷೆ ಹೆಚ್ಚಿಸುತ್ತಾ ಕಲಾರಸಿಕರನ್ನ ಹಿಡಿದಿಟ್ಟುಕೊಂಡಿರೋ ಈ ಚಿತ್ರ ಈಗ ಟೀಸರ್ ಮೂಲಕ ಸೌಂಡ್ ಮಾಡ್ತಿದೆ.
ಯಸ್, `ಸಪ್ತ ಸಾಗರದಾಚೆ ಎಲ್ಲೋ’ ಸೈಡ್-ಬಿ ಟೀಸರ್ ಹೊರಬಿದ್ದಿದೆ. ಮನು ಕ್ಯಾಸೆಟ್ ಹಾಕ್ಕೊಂಡು ಪ್ರಿಯಾಳ ಧ್ವನಿ ಕೇಳುವ ದೃಶ್ಯವನ್ನ ಟೀಸರ್ ನಲ್ಲಿ ತೋರಿಸಲಾಗಿದೆ. ನೀನು ಜೈಲಿನಿಂದ ಹೊರಗಡೆ ಬರುವ ದಿನ ದೊಡ್ಡ ಸೆಲೆಬ್ರೇಷನ್ ಪ್ಲ್ಯಾನ್ ಮಾಡಿದ್ದೀನಿ. ಮನೆಯಲ್ಲ ಡೆಕೋರೇಷನ್ ಮಾಡ್ತೀನಿ ಎನ್ನುವ ಸಂಭಾಷಣೆ ಮನು-ಪ್ರಿಯಾ ಜೋಡಿನಾ ಮತ್ತೆ ಕಣ್ಮುಂದೆ ತಂದು ನಿಲ್ಲಿಸುತ್ತೆ. ಅಂದ್ಹಾಗೇ, ಮೊದಲ ಭಾಗದಲ್ಲಿ ಮನು-ಪ್ರಿಯಾ ಪ್ರೇಮಕಥೆಗೆ ಮನಸೋತ ಸಿನಿಮಾ ಪ್ರೇಮಿಗಳು, ಎರಡನೇ ಭಾಗದಲ್ಲಿ ಮನು- ಪ್ರಿಯಾ ಲವ್ಸ್ಟೋರಿಗೆ ಸಿಗಲಿರುವ ಟ್ವಿಸ್ಟ್ ಅಂಡ್ ಟನ್ರ್ಸ್ ಹಾಗೇ ಮನು ಜೀವನದಲ್ಲಿ ಸುರಭಿ ಪಾತ್ರ ತಿಳಿದುಕೊಳ್ಳುವುದಕ್ಕೆ ಕಾತುರರಾಗಿದ್ದಾರೆ.
ಬ್ಲಾಕ್ ಬಸ್ಟರ್ ನ್ಯೂಸ್ ಅಂದರೆ `ಸಪ್ತ ಸಾಗರದಾಚೆ ಎಲ್ಲೋ’ ಸೈಡ್-ಬಿ ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲೂ ಬಿಡುಗಡೆಯಾಗ್ತಿದೆ. ಇದೇ ನವೆಂಬರ್ 17ರಂದು ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು, ಮಲೆಯಾಳಂನಲ್ಲಿ ತೆರೆಗೆ ತರುವುದಕ್ಕೆ ಪ್ಲ್ಯಾನ್ ಮಾಡಿದ್ದಾರೆ. `ಸಪ್ತ ಸಾಗರದಾಚೆ ಎಲ್ಲೋ’ ಸೈಡ್-ಎ ಫಸ್ಟ್ ಕನ್ನಡದಲ್ಲಷ್ಟೇ ರಿಲೀಸ್ ಮಾಡಲಾಗಿತ್ತು. ಇಲ್ಲಿ ಬಿಗ್ ರೆಸ್ಪಾನ್ಸ್ ಸಿಕ್ಕಿದ್ದೇ ತಡ ಪರಭಾಷಿಗರ ಕಣ್ಣು ಬಿತ್ತು. ಕೊನೆಗೆ ತೆಲುಗಿಗೆ ಡಬ್ ಆಗಿ ಅಲ್ಲಿ ಕೂಡ ಗೆಲುವಿನ ಕೇಕೆ ಹಾಕ್ತು. ಹೀಗಾಗಿ, ಫಿಲ್ಮ್ ಟೀಮ್ ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲೂ ಒಟ್ಟಿಗೆ ರಿಲೀಸ್ ಮಾಡೋದಕ್ಕೆ ತಯಾರಿ ನಡೆಸಿದ್ದಾರೆ.

`ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಎ ರಿಲೀಸ್ ಮಾಡಿ ಏಳು ವಾರ ಕಳೆದ್ಮೇಲೆ, `ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಬಿಡುಗಡೆ ಮಾಡ್ಬೇಕು ಅಂತ ಡಿಸೈಡ್ ಮಾಡಿದ್ವಿ. ಆದರೆ, ಡೆಸ್ಟಿನಿ 77 ದಿನ ಕಾಲಾವಕಾಶ ಕೇಳ್ತಿದೆ. ಹೀಗಾಗಿ, ಅಕ್ಟೋಬರ್ 27ರ ಬದಲು ನವೆಂಬರ್ 17ರಂದು ನಿಮ್ಮೆಲ್ಲರ ಮುಂದೆ ಹಾಜರಾಗಲಿದ್ದೇವೆ. ಎಂದಿನಂತೆ ನಿಮ್ಮ ಪ್ರೀತಿ, ಪ್ರೋತ್ಸಾಹ, ಸಹಕಾರ ಇರಲೆಂದು ಕೇಳಿಕೊಳ್ಳುತ್ತೇವೆ ಅಂತ ನಟ ರಕ್ಷಿತ್ ಶೆಟ್ಟಿ ಇತ್ತೀಚೆಗಷ್ಟೇ ಟ್ವೀಟ್ ಮಾಡಿ ಕೇಳಿಕೊಂಡಿದ್ದರು.
ಹೇಮಂತ್ ರಾವ್ ಕೈಚಳಕದ ಸೀಕ್ವೆಲ್ ಕಮಾಲ್ ಮಾಡುವ ಎಲ್ಲಾ ಲಕ್ಷಣಗಳು ಗೋಚರಿಸ್ತಿವೆ. ರಕ್ಷಿತ್ ಶೆಟ್ಟಿ, ರುಕ್ಷ್ಮಿಣಿ ವಸಂತ್, ಚೈತ್ರಾ ಜೆ. ಆಚಾರ್, ಅವಿನಾಶ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಗೋಪಾಲ್ ಕೃಷ್ಣ ದೇಶ್ಪಾಂಡೆ, ಯಮುನಾ ಶ್ರೀನಿಧಿ ಸೇರಿದಂತೆ ಅತೀ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. `ಸಪ್ತ ಸಾಗರದಾಚೆ ಎಲ್ಲೋ’ ಸೈಡ್-ಎ ಕ್ಲಾಸ್ ನಿಂದ ಕೂಡಿತ್ತು. ಆದರೆ, ಎರಡನೇ ಭಾಗದಲ್ಲಿ ಮನು ಇನ್ನೊಂದು ಮುಖ ಅನಾವರಣಗೊಳ್ಳಲಿದೆ. ಹೌದು, ಸೈಡ್ ಎನಲ್ಲಿ ಲವ್ವರ್ಬಾಯ್ ಆಗಿ ನಿಮ್ಮೆಲ್ಲರ ಹೃದಯ ಗೆದ್ದಿರೋ ಮನು, ಸೈಡ್ ಬಿ ನಲ್ಲಿ ಮಾಸ್ ಹೀರೋ ಆಗಿ ನಿಮ್ಮೆಲ್ಲರ ಮುಂದೆ ಬರಲಿದ್ದಾರೆ.





