ಶನಿವಾರ, ಜುಲೈ 25, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಶ್ರೀಲೀಲಾ ಹಾಗೂ ಶ್ರೀವಲ್ಲಿನಾ ಸೈಡಿಗೆ ತಳ್ಳಿ, ರೌಡಿಬಾಯ್ ಪಕ್ಕದಲ್ಲಿ ನಿಂತು ನಗ್ತಾಳಾ ಸಾಕ್ಷಿ ವೈದ್ಯ?

Vishalakshi Pby Vishalakshi P
30/10/2023
in Majja Special
Reading Time: 1 min read
ಶ್ರೀಲೀಲಾ ಹಾಗೂ ಶ್ರೀವಲ್ಲಿನಾ ಸೈಡಿಗೆ ತಳ್ಳಿ, ರೌಡಿಬಾಯ್ ಪಕ್ಕದಲ್ಲಿ ನಿಂತು ನಗ್ತಾಳಾ ಸಾಕ್ಷಿ ವೈದ್ಯ?

ಸಿನಿದುನಿಯಾದಲ್ಲಿ ಕನ್ನಡತಿಯರಾದ ಶ್ರೀಲೀಲಾ ಹಾಗೂ ಶ್ರೀವಲ್ಲಿ ಹವಾ ಹೆಂಗಿದೆ ಅನ್ನೋದು ನಿಮಗೆಲ್ಲ ಗೊತ್ತೆಯಿದೆ. ಗಂಧದಗುಡಿಯಲ್ಲಿ ಬಣ್ಣ ಹಚ್ಚಿ ಬೆಳ್ಳಿಭೂಮಿ ಅಂಗಳದಲ್ಲಿ ದಿಬ್ಬಣ ಹೊರಟ ಈ ನಟಿಮಣಿಯರಿಗೆ ಈಗ ಸಿಕ್ಕಾಪಟ್ಟೆ ಬೇಡಿಕೆಯಿದೆ. ಕನ್ನಡದಲ್ಲಿ ಒಂದೆರಡು ಸಿನಿಮಾ ಮಾಡಿ ಚಲೋ ಅಂತ ಪರಭಾಷಾ ಕಡೆ ಹೊರಟ ಈ ಇಬ್ಬರು ಬೆಡಗಿಯರು ಈಗ ಸ್ಟಾರ್ ನಾಯಕಿಯರ ಪಟ್ಟ ಅಲಂಕರಿಸಿದ್ದಾರೆ. ಅಚ್ಚರಿ ಅಂದರೆ, ಟಿಟೌನ್ ಅಂಗಳದಲ್ಲಿ ಡಿಮ್ಯಾಂಡಿಂಗ್ ಹೀರೋಯಿನ್ಸ್ ಆಗಿ ಮಿಂಚುತ್ತಿರುವ ಈ ಇಬ್ಬರು ಸುಂದರಿಯರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಸ್ಟಾರ್ ನಾಯಕರ ಸಿನಿಮಾಗೆ ನಾಯಕಿ ನಾನಾ-ನೀನಾ ನೋಡೆಬಿಡೋಣ ಎನ್ನುವಷ್ಟರ ಮಟ್ಟಿಗೆ ಪೈಪೋಟಿ ನಡೆಯುತ್ತಿದೆ. ಸದ್ಯ ಇವರಿಬ್ಬರಿಗೂ ಕೋಕ್ ಕುಡಿಸಿ ಸೈಡಿಗೆ ತಳ್ಳಿ ರೌಡಿಬಾಯ್ ಪಕ್ಕದಲ್ಲಿ ನಿಲ್ಲೋಕೆ ಆ ನಟಿ ರೆಡಿಯಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಹಾಗಾದ್ರೆ ಯಾರು ಆ ನಟಿ? ಇದು ಯಾವ ಸಿನಿಮಾದ ಕಥೆ? ಆ ಬಗ್ಗೆ ಡೀಟೈಲ್ಸ್ ಇಲ್ಲಿದೆ ಓದಿ

ಕನ್ನಡತಿಯರಾದ ಶ್ರೀಲೀಲಾ ಹಾಗೂ ಶ್ರೀವಲ್ಲಿ ಪರಭಾಷೆಯಲ್ಲಿ ಬಹುಬೇಡಿಕೆಯ ನಟಿಯರಾಗಿ ಮಿಂಚ್ತಿರುವುದಕ್ಕೆ ಖುಷಿಯಿದೆ. ಅಲ್ಲಿನ ಸ್ಟಾರ್ ನಾಯಕಿಯರೆನ್ನೆಲ್ಲಾ ಸೈಡಿಗೆ ಸರಿಸಿ ಮೆರೆಯುತ್ತಿರುವುದಕ್ಕೆ ಕನ್ನಡಿಗರಿಗೆ ಹೆಮ್ಮೆನೂ ಇದೆ. ಆದರೆ, ಇವರಿಬ್ಬರ ನಡುವಿನ ಹೆಲ್ದಿ ಕಾಂಪಿಟೇಷನ್ ಉಳಿದ ನಾಯಕಿಯರಿಗೆ ವರವಾಗುವ ಎಲ್ಲಾ ಲಕ್ಷಣಗಳು ಕಾಣ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ `ಏಜೆಂಟ್’ ಸಿನಿಮಾದ ನಟಿ ಸಾಕ್ಷಿ ವೈದ್ಯ ಹೆಸರು ಕೇಳಿಬರುತ್ತಿದೆ. ವಿಜಯ್ ದೇವರಕೊಂಡ ನಟನೆಯ 12ನೇ ಸಿನಿಮಾದಲ್ಲಿ ಸಾಕ್ಷಿ ವೈದ್ಯ ನಾಯಕಿಯಾಗಲಿದ್ದಾರೆನ್ನುವ ಸುದ್ದಿ ಟಿಟೌನ್ ಅಂಗಳದಲ್ಲಿ ಜೋರಾಗಿ ಹಬ್ಬಿದೆ

ಅಂದ್ಹಾಗೇ, ವಿಜಯ್ ನಟನೆಯ 12ನೇ ಸಿನಿಮಾಗೆ ಕಿಸ್ ಚೆಲುವೆ ಶ್ರೀಲೀಲಾ ನಾಯಕಿಯಾಗಿದ್ದರು. ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿ ರೌಡಿಬಾಯ್ ಬಗಲಲ್ಲಿ ನಿಂತು ನಕ್ಕಿದ್ದರು. ಅನಂತರ ಏನಾಯ್ತೋ ಏನೋ ಗೊತ್ತಿಲ್ಲ. ವಿಜಯ್ ಸಿನಿಮಾದಿಂದ ಧಮಾಕ ಚೆಲುವೆ ಹೊರಬಂದಿದ್ದಾರೆನ್ನುವ ಸುದ್ದಿ ಸ್ಪೋಟಗೊಂಡ್ತು. ಆಗ ಎಲ್ಲರು ರೌಡಿಬಾಯ್ ರೂಮರ್ ಗರ್ಲ್‍ಫ್ರೆಂಡ್ ರಶ್ಮಿಕಾ ಕಡೆ ನೋಡಿದರು. ಲಿವಿಂಗ್ ಏರಿಯಾದಲ್ಲಿ ಬಾಬಿಗೆ ಲಿಲ್ಲಿ ಕ್ಲಾಸ್ ತೆಗೆದುಕೊಂಡಳಾ? ಹೀಗೊಂದು ಪ್ರಶ್ನೆ ತಮಗೆ ತಾವೇ ಹಾಕ್ಕೊಂಡು ಮುಸಿಮುಸಿ ನಕ್ಕರು. ಇದಾಗಿ ಮೂರು ನಾಲ್ಕು ದಿನಕ್ಕೆ `ಡಿಯರ್ ಕಾಮ್ರೇಡ್’ ಜೋಡಿ ಮತ್ತೆ ಒಂದಾಗುತ್ತಿದೆಯಂತೆ. ಗೀತಾ ಹಾಗೂ ಗೋವಿಂದ ಮೂರನೇ ಭಾರಿಗೆ ಒಂದಾಗಿ ಅಭಿನಯಿಸಲಿದ್ದಾರಂತೆ ಎನ್ನುವ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿತ್ತು. ಆದ್ರೀಗ ಮತ್ತೊಂದು ಸುದ್ದಿ ಸಮಾಚಾರ ಕೇಳಿಬಂದಿದೆ. ಅದುವೇ ನಟಿ ಸಾಕ್ಷಿ ವೈದ್ಯ ವಿಜಯ್ ಗೆ ಜೋಡಿಯಾಗ್ತಿರುವುದು.

ಹೌದು, ವಲ್ರ್ಡ್ ಫೇಮಸ್ ಲವ್ವರ್ ವಿಜಯ್‍ಗೆ ನಟಿ ಸಾಕ್ಷಿ ವೈದ್ಯ ಸಾಥ್ ನೀಡಲು ಒಪ್ಪಿಕೊಂಡಿದ್ದಾರಂತೆ. ಪವನ್ ಕಲ್ಯಾಣ್, ನಿತಿನ್, ಪ್ರಿನ್ಸ್ ಮಹೇಶ್ ಬಾಬು ಸೇರಿದಂತೆ ಹಲವರ ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿಯಾಗಿದ್ದು ವಿಜಯ್ ಸಿನಿಮಾಗೆ ಡೇಟ್ ಕ್ಲ್ಯಾಶ್ ಆಗ್ತಿದೆಯಂತೆ. ಅತ್ತ ಶ್ರೀವಲ್ಲಿ ಪ್ಯಾನ್ ಇಂಡಿಯಾ `ಪುಷ್ಪ-2′ ಚಿತ್ರದಲ್ಲಿ ತೊಡಗಿಸಿಕೊಂಡಿದ್ದು, ರಣಬೀರ್ ಕಪೂರ್ ಜೊತೆ ನಟಿಸಿರುವ `ಅನಿಮಲ್’ ಸಿನಿಮಾ ಪ್ರಚಾರಕ್ಕೆ ತೆರಳಬೇಕಿದೆ. ಹೀಗಾಗಿ, ನಿರ್ದೇಶಕರು ಹಾಗೂ ನಿರ್ಮಾಪಕರು ಕಿಸ್ ಚೆಲುವೆನೂ ಬೇಡ, ಕಿರಿಕ್ ಬ್ಯೂಟಿಯೂ ಬೇಡ ಅಂತ ತೀರ್ಮಾನಿಸಿದ್ದಾರೆನ್ನುವ ಸುದ್ದಿ ಗಾಸಿಪ್ ಅಂಗಳದಲ್ಲಿ ಓಡಾಡ್ತಿದೆ. ಅಟ್ ದಿ ಸೇಮ್ ಟೈಮ್ ಏಜೆಂಟ್ ಬ್ಯೂಟಿಗೆ ಮಣೆಹಾಕಿ ಕಥೆ ಒಪ್ಪಿಸಿದ್ದಾರೆನ್ನಲಾಗ್ತಿದೆ. ಅವರು ಕೂಡ ಶ್ರೀಲೀಲಾ ಹಾಗೂ ಶ್ರೀವಲ್ಲಿ ಜಾಗಕ್ಕೆ ಬಂದು ಕೂರಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. `ಜೆರ್ಸಿ’ ಸಿನಿಮಾ ಖ್ಯಾತಿಯ ಡೈರೆಕ್ಟರ್ ಗೌತಮ್ ನಾಯ್ಡು ತಿನ್ನನೂರಿಯವರು ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಖುಷಿ ಸಿನಿಮಾ ನಂತರ ಖುಷಿಖುಷಿಯಾಗಿಯೇ ವಿಜಯ್ ಈ ಸಿನಿಮಾ ಒಪ್ಪಿಕೊಂಡಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾ `ವಿ.ಡಿ-12′ ಹೆಸರಲ್ಲಿ ಸೆಟ್ಟೇರಿದೆ. ಸದ್ಯ ನಾಯಕಿಯರ ಆಯ್ಕೆ ವಿಚಾರವಾಗಿ ಬಜಾರ್‍ನಲ್ಲಿ ದಿನಕ್ಕೊಮ್ಮೆ ಸುದ್ದಿಯಾಗ್ತಿದೆ. ಅಷ್ಟಕ್ಕೂ, ಫೈನಲ್ಲಾಗಿ ಯಾರು ರೌಡಿಬಾಯ್ ಬಗಲಲ್ಲಿ ನಿಲ್ತಾರೆ? ಲೈಗರ್ ಜೊತೆ ಲಕಲಕ ಹೊಳೆಯುತ್ತಾರೆ ಕಾದು ನೋಡಬೇಕು

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಖಾಕಿ ತೊಟ್ಟು ‘ಗನ್’ ಹಿಡಿದ ಹುಲಿ ಕಿಶೋರ್!

ಖಾಕಿ ತೊಟ್ಟು ‘ಗನ್’ ಹಿಡಿದ ಹುಲಿ ಕಿಶೋರ್!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.