ಈ ಹಿಂದೆ ‘ಕಿಲಾಡಿಗಳು’ ಎಂಬ ಜನಪ್ರಿಯ ಸಿನಿಮಾವನ್ನು ನಿರ್ದೇಶಿಸಿದ್ದ ಬಿ. ಪಿ ಹರಿಹರನ್, ಈಗ ‘ತಗ್ಗಟ್ಟಿ’ ಎಂಬ ವಿಶೇಷ ಶೀರ್ಷಿಕೆಯ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಅಂದಹಾಗೆ, ‘ತಗ್ಗಟ್ಟಿ’ ಎಂಬುದು ಊರೊಂದರ ಹೆಸರು. ಅದೇ ಹೆಸರನ್ನು ಸಿನಿಮಾದ ಶೀರ್ಷಿಕೆಯಾಗಿ ಇಟ್ಟುಕೊಂಡಿದ್ದೇವೆ ಎಂಬುದು ಚಿತ್ರತಂಡದ ಮಾತು. ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಅವರ ಪುಣ್ಯಭೂಮಿಯಲ್ಲಿ ‘ತಗ್ಗಟ್ಟಿ’ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಿದೆ ಚಿತ್ರತಂಡ
ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಪ್ರವೀಣ್, ನವರತ್ನ, ಅಕ್ಷತ, ಸೂರ್ಯ, ವಿನಯ್, ಮಲ್ಲೇಶ್, ಮಂಡ್ಯ ಸಿದ್ದು, ಗಹನ, ಪಲ್ಲವಿ, ರಕ್ಷಿತಾ, ಬಾಲ ರಾಜ್ವಾಡಿ, ರೇಖಾದಾಸ್, ಶಿವಕುಮಾರ್ ಆರಾಧ್ಯ, ರೇಣು ಶಿಕಾರಿ ಇನ್ನು ಮುಂತಾದ ಪ್ರಮುಖ ಕಲಾವಿದರುಗಳು ಅಭಿನಯಿಸುತ್ತಿದ್ದಾರೆ.
‘ತಗ್ಗಟ್ಟಿ’ ಸಿನಿಮಾಕ್ಕೆ ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆದಿದೆ. ದ್ವಿತೀಯ ಹಂತದ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯಲಿದೆ. ‘ಸಿ. ಸಿ ಸಿನಿ ಪ್ರೊಡಕ್ಷನ್’ ಅಡಿಯಲ್ಲಿ ಚಂದ್ರಮ್ಮ ಚನ್ನಾಚಾರಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಇದೆ ವರ್ಷ ಚಿತ್ರವನ್ನು ತೆರೆಮೇಲೆ ತರುವ ಉದ್ದೇಶದಲ್ಲಿದೆ ಚಿತ್ರತಂಡ.





