ಸೋಮವಾರ, ಜುಲೈ 20, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಕಿಕ್ಕೇರಿಸುತ್ತಿದೆ ಜಯಂತ್ ಕಾಯ್ಕಿಣಿ ಬರೆದ ‘ಜಹಾಪನಾ’ ಹಾಡು!

Vishalakshi Pby Vishalakshi P
16/10/2023
in Majja Special
Reading Time: 1 min read
ಕಿಕ್ಕೇರಿಸುತ್ತಿದೆ ಜಯಂತ್ ಕಾಯ್ಕಿಣಿ ಬರೆದ  ‘ಜಹಾಪನಾ’ ಹಾಡು!

ದೀಪಕ್ ಅರಸ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ “ಶುಗರ್ ಫ್ಯಾಕ್ಟರಿ” ಚಿತ್ರಕ್ಕಾಗಿ ಖ್ಯಾತ ಗೀತರಚನೆಕಾರ ಜಯಂತ ಕಾಯ್ಕಿಣಿ ಅವರು “ಜಹಾಪನಾ” ಎಂಬ ಸುಮಧುರ ಪ್ರೇಮಗೀತೆ ಬರೆದಿದ್ದಾರೆ. ಇತ್ತೀಚೆಗೆ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

ನಿಹಾಲ್ ತಾವ್ರೊ ಹಾಗೂ ಅಮೃತಾ ನಾಯಕ್ ಅವರ ಕಂಠಸಿರಿಯಲ್ಲಿ ಈ ಹಾಡು ಮಧುರವಾಗಿ ಮೂಡಿಬಂದಿದೆ. ಧನಂಜಯ್ ಅವರ ನೃತ್ಯ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಸೋನಾಲ್ ಮೊಂತೆರೊ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಬೀರ್ ರಫಿ ಸಂಗೀತ ನೀಡಿದ್ದಾರೆ.ಈಗಾಗಲೇ “ಶುಗರ್ ಫ್ಯಾಕ್ಟರಿ” ಟ್ರೇಲರ್ ಎಲ್ಲರ ಮನಗೆದ್ದು, ಆಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

ಡಾರ್ಲಿಂಗ್ ಕೃಷ್ಣ ಅವರ ಸಿನಿಜರ್ನಿಯಲ್ಲೇ “ಶುಗರ್ ಫ್ಯಾಕ್ಟರಿ” ಬಿಗ್ ಬಜೆಟ್ ಚಿತ್ರವೆಂದು ಹೇಳಲಾಗುತ್ತಿದೆ. ಅಭಿಮಾನಿಗಳು ಸಹ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು, ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.

ಆರ್ ಗಿರೀಶ್ ನಿರ್ಮಿಸಿರುವ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಜೋಡಿಯಾಗಿ  ಸೋನಾಲ್ ಮಾಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ಕೃಷ್ಣ  ನಟಿಸಿದ್ದಾರೆ. ನವೆಂಬರ್ 24 ರಂದು ಬಹು ನಿರೀಕ್ಷಿತ ಈ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ತೆರೆಮೇಲೆ ಹೊಸಬರ ‘ನೇತ್ರಂ’ ಪ್ರಯೋಗ!

ತೆರೆಮೇಲೆ ಹೊಸಬರ ‘ನೇತ್ರಂ’ ಪ್ರಯೋಗ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.